ಟೆರಿಡೊಫೈಟ

ಬೀಜಕಗಳನ್ನು ಉತ್ಪಾದಿಸುವ ನಾಳಮಯ ಸಸ್ಯಗಳ (ಜರೀಗಿಡಗಳು ಮುಂತಾದವು) ಗುಂಪಿಗೆ ಹಿಂದೆ ಬಳಕೆಯಲ್ಲಿದ್ದ ಹೆಸರು. ಈ ಪದದ ಅರ್ಥ ರೆಕ್ಕೆ ಆಕಾರದ ಎಲೆಗಳನ್ನು ಪಡೆದ ಸಸ್ಯಗಳು ಎಂದು. ಹೂಗಳನ್ನು ಬಿಡದ ಈ ಸಸ್ಯಗಳು ಕ್ಲಬ್‍ಮಾಸ್ (ಲೈಕೊಪಾಡ್ಸ್), ಕುದುರೆ ಬಾಲದ ಗಿಡಗಳು, ಜರೀಗಿಡಗಳು (ಫನ್ರ್ಸ್) ಮತ್ತು ಇರರ ಫಾಸಿಲ್ ಬಗೆಗಳನ್ನು ಒಳಗೊಂಡಿವೆ. ಆಧುನಿಕ ವರ್ಗೀಕರಣ ವ್ಯವಸ್ಥೆಯ ಪ್ರಕಾರ ಇವನ್ನು ಬೀಜಸಸ್ಯಗಳ (ಸ್ಪಮ್ರ್ಯಾಟೊಫೈಟ) ಜೊತೆಯಲ್ಲಿ ಟ್ರೇಕಿಯೊಫೈಟ ಎಂಬ ವಿಭಾಗದಲ್ಲಿ ಸೇರಿಸಲಾಗಿದೆಯಲ್ಲದೆ ಫಿಲಿಸಿನೀ, ಸೈಲಾಪ್ಸಿಡ, ಸ್ಫೀನಾಪ್ಸಿಡ ಎಂಬ ಬೇರೆ ಬೇರೆ ವರ್ಗಗಳಾಗಿ ಕೂಡ ವಿಂಗಡಿಸಲಾಗಿದೆ. ಈ ಸಸ್ಯಗಳ ವಿವರಗಳಿಗೆ ಆಯಾ ವರ್ಗಗಳನ್ನು ನೋಡಿ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ